Current Date 10 Jun, 2026

ಜಗದೀಶ್​ ಅಲ್ವಂತೆ! ಬಿಗ್​ ಬಾಸ್​ ಮನೆಯಲ್ಲಿ ಈ ವ್ಯಕ್ತಿ ತುಂಬಾ ಡೇಂಜರಸ್ ಎಂದ ನಟಿ ಯಮುನಾ!

ಬಿಗ್​ ಬಾಸ್​ ಮನೆಯಲ್ಲಿ ತುಂಬಾ ಡೇಂಜರಸ್​ ವ್ಯಕ್ತಿಯ ಬಗ್ಗೆಯೂ ನಟಿ ಯಮುನಾ ಹೇಳಿದ್ದಾರೆ. ಲಾಯರ್​ ಜಗದೀಶ್​ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್​ ಎಂದು ಹೇಳಿದ್ದಾರೆ. ಸಿಕ್ಕಪಟ್ಟೆ ಮ್ಯಾನಿಪುಲೇಟ್​, ಎಲ್ಲರನ್ನು ತಮ್ಮತ್ತ ಸೆಳೆಯುವವರು. ಏನು ಹೇಳದೆ ಏನು ಮಾಡದೆ ಟ್ರಿಕ್​ ಮಾಡುವವರು ಎಂದು ಹೇಳಿದ್ದಾರೆ.

ಸದ್ಯ ಮೊದಲ ವಾರವೇ ನಟಿ ಹೊರಬಂದಿದ್ದು, ಬಿಗ್​ ಮನೆಯ ಆಟಗಾರರ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ. ಅದರಲ್ಲೂ ಆಟವನ್ನು ಇನ್ನೂ ಪ್ರಾರಂಭಿಸದವರು ಮತ್ತು ಪ್ರಾರಂಭಿಸಿದವರ ಬಗ್ಗೆಯೂ ಹೇಳಿದ್ದಾರೆ. ಲಾಯರ್​ ಜಗದೀಶ್​​ ಮೊದಲ ದಿನದಿಂದಲೇ ಆಟ ಶುರು ಮಾಡಿದ್ದಾರೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಿಚ್ಚ ನಿರೂಪಣೆಗೆ ಬಿಗ್​ ಬಾಸ್​ ಮನೆಯಲ್ಲಿ ಒಂದು ವಾರ ಕಳೆದ ಅನುಭವವನ್ನು ನಟಿ ಯಮುನಾ ಬಿಚ್ಚಿಟ್ಟಿದ್ದಾರೆ.